ರೇಣುಕಾಸ್ವಾಮಿ ತಾಯಿ ಉಲ್ಟಾ ಹೇಳಿಕೆ: ನಟ ದರ್ಶನ್ ಬಿಡುಗಡೆ ಪಕ್ಕಾ? ಹೈಕೋರ್ಟ್ನಿಂದ ಬಿಗ್ ಶಾಕ್!
ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಭಾರಿ ಸಂಚಲನ ಮೂಡಿಸಿರುವ ನಟ ದರ್ಶನ್ Thoogudeepa ಅವರ ರೇಣುಕಾಸ್ವಾಮಿ ಕೊಲೆ ಪ್ರಕರಣವು ಈಗ ಮತ್ತೊಂದು ಅತ್ಯಂತ ರೋಚಕ ತಿರುವು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಮೃತ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರು ಕೋರ್ಟ್ ವಿಚಾರಣೆ ವೇಳೆ ನೀಡಿರುವ ಕೆಲವು ಹೇಳಿಕೆಗಳು ಪ್ರಾಸಿಕ್ಯೂಷನ್ (ಪೊಲೀಸ್) ವಾದಕ್ಕೆ ಉಲ್ಟಾ ಹೊಡೆದಿದ್ದು, ದರ್ಶನ್ ಅಭಿಮಾನಿಗಳಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಏನಿದು ರೇಣುಕಾಸ್ವಾಮಿ ತಾಯಿಯ ಉಲ್ಟಾ ಹೇಳಿಕೆ?ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ವೇಳೆ ಪೊಲೀಸರು ಕಲೆಹಾಕಿದ ಸಾಕ್ಷ್ಯಗಳು ಮತ್ತು ಕೋರ್ಟ್ನಲ್ಲಿ ಮೃತನ ತಾಯಿ ನೀಡಿದ ಹೇಳಿಕೆಗಳ ಮಧ್ಯೆ ಭಾರಿ ವ್ಯತ್ಯಾಸಗಳು ಕಂಡುಬಂದಿವೆ. ಮುಖ್ಯವಾಗಿ ಮೂರು ವಿಷಯಗಳಲ್ಲಿ ರತ್ನಪ್ರಭಾ ಅವರ ಹೇಳಿಕೆ ಉಲ್ಟಾ ಹೊಡೆದಿದೆ ಎನ್ನಲಾಗಿದೆ ಶವದ ಗುರುತು ಪತ್ತೆ: ಪೊಲೀಸರು ರೇಣುಕಾಸ್ವಾಮಿ ಶವವನ್ನು ಅವರ ಐಡಿ ಕಾರ್ಡ್ (ID Card) ಮೂಲಕ ಗುರುತಿಸಿದ್ದರು ಎಂದು ತಾಯಿ ಕೋರ್ಟ್ನಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಪೊಲೀಸ್ ಚಾರ್ಜ್ಶೀಟ್ ಪ್ರಕಾರ ಅಂತಹ ಯಾವುದೇ ಐಡಿ ಕಾರ್ಡ್ ಸ್ಥಳದಲ್ಲಿ ಸಿಕ್ಕಿರಲಿಲ್ಲ. ಮೊಬೈಲ್ ಕರೆಗಳ ವಿವರ (CDR): ಕೊಲೆಯಾದ ದಿನದಂದು ಮಗನ ಜೊತೆ ನಡೆದ ಕರೆಗಳ ವಿವರಣೆ ಮತ್ತು ಮೊಬೈಲ್ ನಂಬರ್ ಬಳಕೆಯ ತಾಂತ್ರಿಕ ಸಾಕ್ಷ್ಯಗಳಿಗೂ, ತಾಯಿ ಕೋರ್ಟ್ನಲ್ಲಿ ನೀಡಿದ ಹೇಳಿಕೆಗೂ ತಾಳೆಯಾಗುತ...