ಪೋಸ್ಟ್‌ಗಳು

Crime News ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನಟ ದರ್ಶನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಪ್ರದೋಶ್ ಮಾಫಿಸಾಕ್ಷಿ? ಚಾಲೆಂಜಿಂಗ್ ಸ್ಟಾರ್ ಬಚಾವ್ ಆಗ್ತಾರಾ? ಅಸಲಿ ಸತ್ಯ ನೋಡಿ!

ಇಮೇಜ್
ಹೌದು ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ತಿರುವುಗಳು ಸಿಗುತ್ತಿದ್ದು, ಇದೀಗ ಇಡೀ ಕೇಸ್‌ಗೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಪ್ರದೋಶ್, ನ್ಯಾಯಾಲಯದ ಮುಂದೆ ಮಾಫಿಸಾಕ್ಷಿ (Approver) ಆಗಲು ಮುಂದಾಗಿದ್ದಾನೆ ಎಂಬ ಬಿಸಿ ಬಿಸಿ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಬೆಳವಣಿಗೆಯಿಂದ ನಟ ದರ್ಶನ್ ಅವರು ಪ್ರಕರಣದಿಂದ ಪೂರ್ತಿಯಾಗಿ ಬಚಾವ್ ಆಗಲಿದ್ದಾರೆಯೇ ಎಂಬ ದೊಡ್ಡ ಚರ್ಚೆ ಸಾರ್ವಜನಿಕರಲ್ಲಿ ಶುರುವಾಗಿದೆ.  ಕಾನೂನು ನಿಯಮಗಳ ಪ್ರಕಾರ, ಯಾವುದೇ ಒಂದು ದೊಡ್ಡ ಅಪರಾಧ ಪ್ರಕರಣದಲ್ಲಿ ಸಹ-ಆರೋಪಿಯಾಗಿದ್ದ ವ್ಯಕ್ತಿ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡು, ಪ್ರಕರಣದ ಅಸಲಿ ಸತ್ಯವನ್ನು ನ್ಯಾಯಾಲಯದ ಮುಂದೆ ಬಿಚ್ಚಿಡಲು ಒಪ್ಪಿಕೊಂಡರೆ ಅವನನ್ನು ಮಾಫಿಸಾಕ್ಷಿ ಎಂದು ಕರೆಯಲಾಗುತ್ತದೆ. ಪ್ರದೋಶ್ ಈ ರೀತಿ ಮಾಫಿಸಾಕ್ಷಿ ಆಗುವುದರಿಂದ ಪೊಲೀಸರಿಗೆ ಮತ್ತು ತನಿಖಾ ಸಂಸ್ಥೆಗೆ ಇಡೀ ಕೊಲೆ ಪ್ರಕರಣದ ತನಿಖೆಯನ್ನು ಇನ್ನು ಬಲಪಡಿಸಲು ದೊಡ್ಡ ಆಧಾರ ಸಿಕ್ಕಂತಾಗುತ್ತದೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುವ ಕಾರಣಕ್ಕಾಗಿ ಮಾಫಿಸಾಕ್ಷಿ ಆದ ವ್ಯಕ್ತಿಗೆ ಶಿಕ್ಷೆಯ ಪ್ರಮಾಣದಲ್ಲಿ ವಿನಾಯಿತಿ ಸಿಗುವ ಅವಕಾಶವಿರುತ್ತದೆ.  ಆದರೆ, ಇದರಿಂದ ನಟ ದರ್ಶನ್ ಬಚಾವ್ ಆಗುತ್ತಾರಾ ಅಥವಾ ಸಂಕಷ್ಟ ಇನ್ನು ಹೆಚ್ಚಾಗುತ್ತಾ ಎಂಬ ಪ್ರಶ್ನೆಗೆ ಕಾನೂನು ತಜ್ಞರು ಬೇರೆಯದೇ ಅಭಿಪ್ರಾಯ ವ್ಯಕ...