ನಿಮ್ಮ ಮೊಬೈಲ್ ಕಳೆದುಹೋಗಿದೆಯೇ? ಕೇಂದ್ರ ಸರ್ಕಾರದ CEIR ಪೋರ್ಟಲ್ ಮೂಲಕ ಕದ್ದ ಫೋನ್ ಪತ್ತೆ ಹಚ್ಚಿ!
ಹೌದು ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ಪ್ರತಿಯೊಬ್ಬರ ಜೀವನದ ಅತ್ಯಗತ್ಯ ವಸ್ತುವಾಗಿದೆ. ಬ್ಯಾಂಕಿಂಗ್ ವಿವರಗಳಿಂದ ಹಿಡಿದು ವೈಯಕ್ತಿಕ ಫೋಟೋಗಳವರೆಗೆ ಎಲ್ಲವೂ ಮೊಬೈಲ್ನಲ್ಲಿಯೇ ಇರುತ್ತವೆ. ಇಂತಹ ಬೆಲೆಬಾಳುವ ಮೊಬೈಲ್ ಫೋನ್ ಕದ್ದ ಹೋದರೆ ಅಥವಾ ಎಲ್ಲಾದರೂ ಕಳೆದುಹೋದರೆ ತಕ್ಷಣವೇ ಗಾಬರಿಯಾಗುವುದು ಸಹಜ. ಆದರೆ ಈಗ ನಿಮ್ಮ ಕದ್ದ ಮೊಬೈಲ್ ಅನ್ನು ಪತ್ತೆ ಹಚ್ಚಲು ಮತ್ತು ದುರುಪಯೋಗವಾಗದಂತೆ ತಡೆಯಲು ಕೇಂದ್ರ ಸರ್ಕಾರವು CEIR (Central Equipment Identity Register) ಎಂಬ ಅದ್ಭುತ ಪೋರ್ಟಲ್ ಅನ್ನು ಜಾರಿಗೆ ತಂದಿದೆ. ಇದರ ಮೂಲಕ ನಿಮ್ಮ ಫೋನ್ ಎಲ್ಲಿದೆ ಮತ್ತು ಯಾರು ಬಳಸುತ್ತಿದ್ದಾರೆ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. 1. ಮೊಬೈಲ್ ಕಳೆದುಹೋದರೆ ಮೊದಲು ಏನು ಮಾಡಬೇಕು?ನಿಮ್ಮ ಫೋನ್ ಕಾಣೆಯಾದ ತಕ್ಷಣ ಮಾಡಬೇಕಾದ ಮೊದಲ ಕೆಲಸವೆಂದರೆ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸ್ ದೂರು (FIR / Lost Report) ದಾಖಲಿಸುವುದು. ದೂರು ನೀಡಿದ ನಂತರ ಪೊಲೀಸರು ನಿಮಗೆ ಒಂದು ಸ್ವೀಕೃತಿ ಪತ್ರ (Acknowledgement) ಮತ್ತು ರಶೀದಿ ಸಂಖ್ಯೆಯನ್ನು ನೀಡುತ್ತಾರೆ. ಇದರೊಂದಿಗೆ ನಿಮ್ಮ ಮೊಬೈಲ್ ನೆಟ್ವರ್ಕ್ ಸೇವೆ ಒದಗಿಸುವವರಿಂದ (Airtel, Jio ಇತ್ಯಾದಿ) ಅದೇ ನಂಬರ್ನ ಹೊಸ ಸಿಮ್ ಕಾರ್ಡ್ ಅನ್ನು ಪಡೆದುಕೊಳ್ಳಿ. 2. CEIR ವೆಬ್ಸೈಟ್ನಲ್ಲಿ ಮೊಬೈಲ್ ಬ್ಲಾಕ್ ಮಾಡುವುದು ಹೇಗೆ?ಕಳ್ಳನು ನಿಮ್ಮ ಮೊಬೈಲ್ ಬಳಸದಂತೆ ಲಾಕ್ ಮಾಡಲು ...