ಪೋಸ್ಟ್‌ಗಳು

Shanti Kranti Re Release ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಅಂದು ಸೋತ ಸಿನಿಮಾ ಇಂದು ಗೆಲ್ಲಲೇಬೇಕು: ಸೋಶಿಯಲ್ ಮೀಡಿಯಾ ವೈರಲ್ ಬೆನ್ನಲ್ಲೇ 'ಶಾಂತಿ ಕ್ರಾಂತಿ' ರೀ-ರಿಲೀಸ್‌ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಗ್ರೀನ್ ಸಿಗ್ನಲ್!

ಇಮೇಜ್
ಹೌದು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇವತ್ತು ಸಾಮಾಜಿಕ ಜಾಲತಾಣಗಳಲ್ಲಿ ಒಂದು ಅಭೂತಪೂರ್ವ ಡಿಜಿಟಲ್ ಕ್ರಾಂತಿ ಆರಂಭವಾಗಿದೆ. ಸುಮಾರು ೩೫ ವರ್ಷಗಳ ಹಿಂದೆ, ಅಂದರೆ ಸೆಪ್ಟೆಂಬರ್ ೧೯, ೧೯೯೧ ರಂದು ಬಿಡುಗಡೆಯಾಗಿದ್ದ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರ ಕನಸಿನ ಮಹಾಗ್ರಂಥ 'ಶಾಂತಿ ಕ್ರಾಂತಿ' ಚಲನಚಿತ್ರವನ್ನು ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆ (Re-release) ಮಾಡಬೇಕು ಎಂಬ ಭಾರಿ ಒತ್ತಾಯ ಕೇಳಿಬರುತ್ತಿದೆ. ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ರೀಲ್ಸ್‌ಗಳಲ್ಲಿ ಅಭಿಮಾನಿಗಳು ರವಿಚಂದ್ರನ್ ಅವರನ್ನು ಸಾಲಾಗಿ ಟ್ಯಾಗ್ ಮಾಡಿ ಈ ಬಗ್ಗೆ ಸರಣಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಈ ಭಾರಿ ಸದ್ದು ಈಗ ನೇರವಾಗಿ ಕ್ರೇಜಿಸ್ಟಾರ್ ಅವರ ಮನೆಗೆ ತಲುಪಿದ್ದು, ಇದಕ್ಕೆ ಅವರ ಕಡೆಯಿಂದ ಭರ್ಜರಿ ಸಿಕ್ಕಿದೆ. ಇತ್ತೀಚಿನ ಮಾಧ್ಯಮಗೋಷ್ಠಿಯಲ್ಲಿ ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ಅವರು ಮಾತನಾಡಿ, "ಅಭಿಮಾನಿಗಳು ಅಪ್ಪನನ್ನು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಟ್ಯಾಗ್ ಮಾಡುತ್ತಿದ್ದಾರೆ. ಇವತ್ತು ನಾನು ಮತ್ತು ಅಪ್ಪ ಈ ಮರು-ಬಿಡುಗಡೆಯ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದ್ದೇವೆ ಮತ್ತು ಅಪ್ಪ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ" ಎಂದು ಬಿಗ್ ಅಪ್ಡೇಟ್ ನೀಡಿದ್ದಾರೆ ಅಂದು ಸೋತ ಸಿನಿಮಾ ಇಂದು ಗೆಲ್ಲಲಿದೆಯೇ?ಆಗಿನ ಕಾಲಕ್ಕೆ ಬರೋಬ್ಬರಿ ೧೦ ಕೋಟಿ ರೂಪಾಯಿಗಳಿಗೂ ಅಧಿಕ ಭಾರಿ ಬಜೆಟ್‌ ನಲ್ಲಿ ಈ ಚಿತ್ರವನ್ನ...